

2nd April 2026

ನೇಸರಗಿ - ಗ್ರಾಮದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ 1999-2002 ನೇ ಸಾಲಿನ ಬಿ. ಎ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿ- ವಿದ್ಯಾರ್ಥಿನೀಯರಿಂದ ಗುರುವಂದನೆ ಹಾಗೂ ಸ್ನೇಹಿತರ ಪುನರ್ ಮಿಲನ ಸಮಾರಂಭ ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಎಫ್.ಡಿ. ಗದ್ದಿಗೌಡರ ವಿರಚಿತ 'ಗುರು ನೀನು ಶಿಷ್ಯ ನಾನು ' ಧ್ವನಿ ಸುರುಳಿ ಬಿಡುಗಡೆ ಸಮಾರಂಭ ದಿ. 5-4-2026 ರಂದು ಮುಂಜಾನೆ 9 ಘಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನೆರವೇರಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಚನ್ನಮ್ಮನ ಕಿತ್ತೂರು ಶಾಸಕರು, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಾಬಾ ಸಾಹೇಬ ಪಾಟೀಲ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಫ್ .ಡಿ. ಗದ್ದಿಗೌಡರ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ನಿವೃತ್ತ ಜಂಟಿ ನಿರ್ದೇಶಕರಾದ ವಿ .ಎಸ್. ಪ್ರಕಾಶ, ಅಥಿತಿಗಳಾಗಿ ನಿವೃತ್ತ ಪ್ರಾಚಾರ್ಯ, ಜನಪ್ರೀಯ ಸಾಹಿತಿಗಳಾದ ಡಾ. ವಾಯ್ .ಎಮ್. ಯಾಕೊಳ್ಳಿ, ಕಾಲೇಜು ಸುಧಾರಣೆ ಸಮಿತಿ ಉಪಾಧ್ಯಕ್ಷರಾದ ಅಡಿವೆಪ್ಪ ಮಾಳಣ್ಣವರ, ಕಾಲೇಜು ಸುಧಾರಣೆ ಸಮಿತಿಯ ಸದಸ್ಯರು,1999-2002 ರಲ್ಲಿ ಶಿಕ್ಷಣ ಕಲಿಸಿದ ಉಪನ್ಯಾಸಕರು, ಸದ್ಯದ ಉಪನ್ಯಾಸಕರು, ಭೋಧಕ ಭೋಧಕೇತರ ಸಿಬ್ಬಂದಿ,1999-2002 ರಲ್ಲಿ ಬಿ.ಎ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು, ವಿದ್ಯಾರ್ಥಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆಂದು ಪ್ರಾಚಾರ್ಯ ಡಾ.ಎಫ್.ಡಿ.ಗಡ್ಡಿಗೌಡರ ತಿಳಿಸಿದ್ದಾರೆ.

ಹುಲಿಯಪ್ಪ ಮತ್ತು ಇತರರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಿ ; ಕೊಳಗಲ್ಲು ಗ್ರಾಮಸ್ಥರ ಒತ್ತಾಯ

ಬಳ್ಳಾರಿ: ರಾಷ್ಟೀಯ ಹೆದ್ದಾರಿ 150-ಎ ರಸ್ತೆಯ ಸೇತುವೆ ಮರು ನಿರ್ಮಾಣ; 60 ದಿನಗಳ ಕಾಲ ವಾಹನ ಸಂಚಾರ ಮಾರ್ಗ ಬದಲಾವಣೆ